Castles in the air - they are so easy to take refuge in. And so easy to build, too.

आम्हां घरी धन शब्दांचीच रत्नें | शब्दांचीच शस्त्रें यत्न करुं ||
शब्द चि आमुच्या जीवांचे जीवन | शब्दें वांटूं धन जनलोकां ||
तुका म्हणे पाहा शब्द चि हा देव | शब्द चि गौरव पूजा करुं ||
- abhang of Tukaram Wolhoba Ambile of Dehu

There's No Freedom Like That of a Child's Imagination

கடலுக்கு உண்டு கற்பனைக்கு இல்லை கட்டுப்பாடு

Monday, December 26, 2016

Learn Tulu - Lesson 62

Days of the week

English – Kannada – Tulu

Monday – ಸೋಮವಾರ – ಸೋಮಾರ

Tuesday – ಮಂಗಳವಾರ – ಅಂಗಾರೆ

Wednesday – ಬುಧವಾರ – ಬುದಾರ

Thursday – ಗುರುವಾರ — ಗುರುವಾರ

Friday – ಶುಕ್ರವಾರ – ಶುಕ್ರಾರ

Saturday – ಶನಿವಾರ – ಶನಿವಾರ

Sunday – ಭಾನುವಾರ — ಇತಾರ

Labels: ,

Thursday, December 15, 2016

Learn Tulu - Lesson 61

Imperatives

English - Kannada - Tulu

Go - ಹೋಗು - ಪೊಲ

Come - ಬಾ - ಬಲ

Sit - ಕುಳಿತುಕೊ - ಕುಲ್ಲು

Laugh - ನಾಗು - ತೆಲಿಪು

Stop ನಿಲ್ಲು - ಉನ್'ತ್

Call - ಕರೆ - ಲೆಪ್ಪು

Tell - ಹೇಳು -  ಪಣ್

Do - ಮಾಡು - ಮಲ್ಪು / ಮನ್ಪು

Write - ಬರೆ - ಬರೆಲ

Read - ಓದು - ಒಡ್ಲ

Give - ಕೊಡು - ಕೂರು

Take - ತೆಗೆದುಕೊ - ದೆತೊನು / ದೆತೊಂದ್ಲ

Eat - ತಿನ್ನು - ತಿನ್ನು / ತಿನ್ಲ

Drink - ಕುಡಿ - ಪರು / ಪೆರ್ಲ

Run - ಓಡು - ಬಲಿಪು / ಬಲ್ಪುಲ

Get up - ಎದ್ದೇಳು - ಲಕ್ಕ

Dance - ಕುಣಿ - ನಲಿಪು

Watch - ನೋಡು - ತೂಲ

Wait - ಕಾಯಿ - ಕಾಪು

Talk - ಮಾತನಾಡು - ಪಾತೆರ್

Labels: ,

Monday, December 12, 2016

Learn Tulu - Lesson 60

Tulu Pronouns

I — ನಾನು ― ಯಾನ್

Thou — ನೀನು ― ಈ

He — ಅವನು — ಆಯೆ

She ― ಆವಳು ― ಆಲ್

We ―  ನಾವು ― ನಮ

Ye —  ನೀವು — ಈರ್

They ― ಅವರು ― ಅಕ್ಲ್

That ― ಅದು ― ಅವು

Labels: ,

Monday, November 28, 2016

Learn Tulu - Lesson 59

This is additional material that I've collected, unrelated to the original 58 OurKarnataka.com lessons. These are links to two apps and some websites with simple, conversational material in Roman script:

A good place to start learning:

EasyTulu.com with ~40 lessons

Other Web Resources:

1. Simple phrases and some vocabulary at Thiya Welfare
2. A seven day learning guide at raveeshkumar.com
3. Conversational Tulu at Gunapala Alva's blog
4. Some more conversations, with grammatical notes at LearnKannada.in
5. Comparative phrases in Kannada, Tulu and Konkani at Mangalore.com
6. Very basic vocabulary and phrases at languageshome.in
7. A more extensive vocabulary at the Tech Mangalore blog
8. A quick look at the old Tulu script at Omniglot.com
9. A historical and dialectical perspective at developschools.org
10. A longish discussion on the old Tulu script, also at developschools.org
11. Some discussions on Tulu grammar, again at developschools.org (and follow the blog from thereon)

Dictionary:
The full text of the 1886 TULU-ENGLISH dictionary by  Rev. A. Manner, printed at the Basel Mission Press

Apps:

1. Learn Tulu Quickly: basic vocabulary and phrases
2. iLearn Kannada : Tulu — very basic phrases
3. Tulu Hit Songs

I will add more links and resources as I find time.

Labels: ,

Monday, November 21, 2016

Learn Mangalore Konkani - Lesson 36

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of Aravinda VK's ASCII to Unicode converter and the Kannada typing module at HiGopi.com, I've now redone lesson 36 in Unicode Kannada. This is the last lesson.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ. 

ನಮಸ್ಕಾರ ಸುರೇಶ್, ನೀವು ಹೇಗಿದ್ದೀರಿ?
ನಮಸ್ಕಾರು ಸುರೇಶ, ಕಶ್ಶಿ ಅಸ್ಸ ತು?

ಓಹ್ ನವೀನ್, ಬನ್ನಿ ಬನ್ನಿ.... ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ?
ಓಹ್ ನವೀನು, ಯೋ... ಯೋ.... ಹಾಂವ್ ಸೌಖ್ಯ. ತೂ ಕಶ್ಶಿ ಅಸ್ಸ?

ನಾನೂ ಕೂಡ ಚೆನ್ನಾಗಿದ್ದೇನೆ. ಮತ್ತೆ ಏನು ವಿಶೇಷ?
ಹಂವೈ ಸೌಖ್ಯರೆ.... ಅನಿ ಕಸನೆ ವಿಶೇಷು?

ವಿಶೇಷವೇನೂ ಇಲ್ಲ. ಎಲ್ಲಾ ನೀವೇ ಹೇಳಬೇಕು.
ವಿಶೇಷು ಕಾಯೀನ. ಪೂರಾ ತೂಂಚಿ ಸಂಗ್ಕ.

ಸುರೇಶ್‍ರವರೇ, ನಿಮ್ಮಿಂದ ನನಗೊಂದು ಸಹಾಯ ಆಗಬೇಕಿತ್ತು.
ಸುರೇಶ, ತುಗೆಲೆ ನಿಮಿತ್ ಮಕ್ಕ ಏಕ್ ಉಪ್ಕಾರು ಜಾವ್ಕ ಅಶ್ಶಿಲೆ ಮಾರಾಯ.

ಹೇಳಿ ನವೀನ್, ನನ್ನಿಂದ ಸಾಧ್ಯವಾಗೋ ಕೆಲಸವಾದರೆ ಅವಶ್ಯಕವಾಗಿ ಮಾಡಿ ಕೊಡುತ್ತೇನೆ. ಅದು ಏನೂಂತ ಹೇಳಿ.
ಸಾಂಗ್ರೆ ನವೀನ, ಮಕ್ಕ ಸಾಧ್ಯ ಜವ್ಚೆ ತಸಲೆ ಕಾಮ್ ಜಲ್ಲ್ಯಾರಿ ಖಂಡಿತ ಕೋರ್ನು ದಿತ್ತ. ಥೇಂ ಕಸನೆ ಮೋಣು ಸಾಂಗ್.

ನನ್ನ ಮಗನಿಗೆ ವಿಜಯ ವಿಠಲ ಶಾಲೆಯಲ್ಲಿ ಎಂಟನೆಯ ತರಗತಿಗೊಂದು ಸೀಟು ಬೇಕಾಗಿತ್ತು.
ಮೆಗೆಲೆ ಪುತ್ತಾಕ್ ವಿಜಯ ವಿಠ್ಠಲ ಸ್ಕೂಲಾಂತು ಏಕ್ ಸೀಟ್ ಜಾವ್ಕ ಅಶ್ಶಿಲೆ.

ಅಲ್ಲಿ ನಮ್ಮ ಮಾತಿಗೆ ಬೆಲೆ ಇರುವುದಿಲ್ಲ. ವಿದ್ಯಾರ್ಥಿಯ ಮೆರಿಟ್ ಮೇಲೆ ಮಾತ್ರ ಸೀಟು.
ಥೈಂ ಅಮ್ಗೆಲೆ ಉತ್ರಾಕ್ ಮೋಲ್ ಅಸ್ಸನ. ಚೆರ್ಡುಂವಾಲೆ ಬುದ್ಧಂತ್ಕಾ ಸೀಟುಕ್ ಮಾತ್ರ ಮೋಲ್.

ನನ್ನ ಮಗನಿಗೆ ಒಳ್ಳೆಯ ಅಂಕಗಳು ಬಂದಿವೆ. ಆದರೆ ವೈಟಿಂಗ್ ಲಿಸ್ಟ್‍ನಲ್ಲಿ ಪ್ರಕಟಿಸಿದ್ದಾರೆ.
ಮೆಗೆಲೆ ಪುತ್ತಾಕ್ ಲಾಯಿಕ್ ಮಾರ್ಕ್ಸ್ ಐಲ. ಜಲ್ಲ್ಯಾರಿ ವೈಟಿಂಗ್ ಲಿಸ್ಟಾಂತು ಘಲ್ಲ.

ಸರಿ ನೋಡೋಣ. ಪ್ರಯತ್ನಿಸಿ ನೋಡುತ್ತೇನೆ.
ಜಾಯಿತ್. ಪೊಳಯ. ಪ್ರಯತ್ನ ಕೋರ್ನು ಪಳೈತ.

ನೀವು ಹಾಗೆ ಮಾಡಿದರೆ ನಾನು ನಿಮಗೆ ತುಂಬಾ ಋಣಿಯಾಗಿರುತ್ತೇನೆ. ನಾನು ಪುನಃ ನಿಮ್ಮನ್ನು ಯಾವಾಗ ಭೇಟಿ ಮಾಡಲಿ?
ತೂ ತಶ್ಶಿ ಕೆಲ್ಲ್ಯಾರಿ ಮಕ್ಕ ಮಸ್ತ್ ಉಪ್ಕಾರ ಜತ್ತ. ಹಾಂವ್ ತುಕ್ಕ ಅಪಾಸ್ ಕೆದನ ಮೆಳ್ಕ?

ನೀವು ಒಂದು ಕೆಲಸ ಮಾಡಿ. ನಾಳೆ ನಿಮ್ಮ ಮಗನನ್ನು ಕರೆದುಕೊಂಡು ಬೆಳಿಗ್ಗೆ ಒಂಭತ್ತು ಗಂಟೆಗೆ ನಮ್ಮ ಶಾಸಕರ ಮನೆಯ ಬಳಿ ಬನ್ನಿ. ನಾನು ನಿಮ್ಮನ್ನು ಅಲ್ಲಿಯೇ ಭೇಟಿಯಾಗುತ್ತೇನೆ.
ತೂ ಏಕ್ ಕಾಮ್ ಕರಿ. ಫಾಯಿ ಸಕಾಣಿ ನಂವ್ ಘಂಟ್ಯಾಕ್ ತುಗೆಲೆ ಪುತ್ತಾಕ್ ಘೇವ್ನು ಅಮ್ಗೆಲೆ ಎಮ್ಮೆಲ್ಲೆಲ್ ಘರಾಕ್ ಯೋ. ಹಾಂವ್ ತುಕ್ಕ ತೈಂಚಿ ಮೆಳ್ತ.

ಹಾಗೆಯೇ ಆಗಲಿ. ನಿಮ್ಮಿಂದ ನನಗೆ ಬಹಳ ಉಪಕಾರವಾಯಿತು.
ತಶೀ ಜವ್ವೊ. ತುಗೆಲೆ ನಿಮಿತ್ ಮಕ್ಕ ಮಸ್ತ್ ಉಪ್ಕಾರು ಜಲ್ಲೆ ಮಾರಾಯ.

ಉಪಕಾರ ಎಲ್ಲಿಂದ ಬಂತು? ನಮ್ಮಿಂದಾಗೋವಷ್ಟು ನಾವು ಮಾಡುತ್ತೇವೆ. ಉಳಿದದ್ದೆಲ್ಲಾ ದೇವರ ಮಹಿಮೆ.
ಉಪ್ಕಾರು ಕಸನೆ ಮಾರಾಯ. ಅಮ್ಕ ಕಿತ್ಲೆ ಸಾಧ್ಯ್‍ಕೀ ತಿತ್ಲೆ ಅಮಿ ಕರ್ತಾಂಚಿ. ವರ್ಲೆಲೆ ಪೂರಾ ದ್ಯಾವಾಲೆ.

ಸರಿ... ಹಾಗಾದರೆ ನಾಳೆ ನಾನು ನಿಮ್ಮನ್ನು ಭೇಟಿಯಾಗುತ್ತೇನೆ.
ಜವ್ವೊ. ತಸ್ಲ್ಯಾರಿ ಫಾಯಿ ಹಾಂವ್ ತುಕ್ಕ ಮೆಳ್ತ.

Lesson prepared by: ಸಂದೀಪ್ ಶೆಣೈ, ಮೈಸೂರು

Labels: , , ,

Learn Mangalore Konkani - Lesson 35

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of Aravinda VK's ASCII to Unicode converter and the Kannada typing module at HiGopi.com, I've now redone lesson 35 in Unicode Kannada.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ. 

ಹರಿಹರೇಶ್ವರರವರೇ, ನಮಸ್ಕಾರಗಳು. ಹೇಗಿದ್ದೀರಿ?
ಹರಿಹರೇಶ್ವರಾಂಕ್ ನಮಸ್ಕಾರು. ಕಶ್ಶಿ ಅಸ್ಸಾಂಚಿ ತುಮಿ?

ನಮಸ್ಕಾರ ನವೀನ, ನಾನು ದೇವರ ದಯೆಯಿಂದ ಚೆನ್ನಾಗಿದ್ದೇನೆ. ನೀನು ಹೇಗಿದ್ದೀಯಾ?
ನಮಸ್ಕಾರು ನವೀನಾಕ್. ಹಾಂವ್ ದ್ಯಾವಾಲೆ ದಯೇಂತು ಆರಾಮೆರಿ ಅಸ್ಸ. ತು ಕಶ್ಶಿ ಅಸ್ಸ್?

ನಾನೂ ದೇವರ ದಯೆಯಿಂದ ಚೆನ್ನಾಗಿದ್ದೇನೆ. ಏನು ಬಹಳ ಅಪರೂಪ?
ಹಂವೈಂ ದ್ಯಾವಾಲೆ ದಯೇಂತು ಆರಾಮೆರಿ ಅಸ್ಸ್. ಇತ್ತೆ ಭಾರೀ ಅಪರೂಪ್?

ಅದು ಹೌದು. ನಿನಗೆ ತಿಳಿಸಲು ಮರೆತಿದ್ದೆನು. ಮುಂದಿನ ಶನಿವಾರ ಅಗ್ರಹಾರದಲ್ಲಿರುವ ಶ್ರೀ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಗೆ ನನ್ನ ಆರೋಗ್ಯ ಭಾಗ್ಯ ಎನ್ನುವ ಪುಸ್ತಕದ ಬಿಡುಗಡೆಯ ಕಾರ್ಯಕ್ರಮವಿದೆ. ನೀನು ನಿನ್ನ ಗೆಳೆಯರೊಂದಿಗೆ ಬರಲೇಬೇಕು.
ತೇ ವೈ. ತುಕ್ಕ ಸಂಗುಕ್ ವಿಸರ್ಲೆ. ಎವ್ಚೆ ಶನಿವಾರ ಅಗ್ರಹಾರಾಂತು ಅಶ್ಚೆ ಶ್ರೀ ರಾಜೇಂದ್ರ ಕಲ್ಯಾಣ ಮಂಟಪೇಂತು ಸಕಾಣಿ ಇಕ್ರ ಗಂಟೇಕ್ ಮೆಗೆಲೆ ಆರೋಗ್ಯ ಭಾಗ್ಯ ಮೊಣ್ಚೆ ಬುಕ್ಕಾ ಬಿಡುಗಡೆ ಕಾರ್ಯಕ್ರಮ ಅಸ್ಸ್. ತು ತುಗೆಲೆ ಫ್ರೆಂಡ್ಸಾಲೊಟ್ಟು ಎವುಕಾಚಿ.

ಓಹ್ ಹೌದಾ? ವಿಷಯವನ್ನು ಕೇಳಿ ತುಂಬಾ ಸಂತೋಷವಾಯಿತು. ಅಂದ ಹಾಗೆ ಪುಸ್ತಕ ಬಿಡುಗಡೆಗೆ ಅತಿಥಿಗಳಾಗಿ ಯಾರು ಆಗಮಿಸುತ್ತಿದ್ದಾರೆ?
ಓ ವೈವೇ? ವಿಷಯು ಐಕುನು ಮಸ್ತ್ ಖುಶಿ ಜಲ್ಲೆ. ಸಂಗಿಲ್‍ಮಣ್ಕೆ ಬುಕ್ಕಾಚೆ ಬಿಡುಗಡೇಕ್ ಸೊಯಿರೆ ಕೋಣ್ ಎತ್ತಾಸ್?

ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿರುವ ಶ್ರೀ ವಿಶ್ವೇಶ್ವರ ಭಟ್ಟರು ಹಾಗೂ ಕನ್ನಡ ಸಾಹಿತ್ಯ ಲೋಕದ ಪಂಡಿತರಾದ ದಿಗ್ಗಜರುಗಳು ಅತಿಥಿಗಳಾಗಿ ಬರುತ್ತಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆಯ ಮುನ್ನವೇ ನೀವು ಬರಬೇಕು. ಕಾರ್ಯಕ್ರಮಕ್ಕೆ ಕೆಲವು ಸ್ವಯಂಸೇವಕರು ಬೇಕು. ಹಾಗಾಗಿ ನಿನ್ನ ಸಹಕಾರ ನನಗೆ ಬೇಕು.
ವಿಜಯ ಕರ್ನಾಟಕ ಪೇಪರಾಚೆ ಸಂಪಾದಕು ಶ್ರೀ ವಿಶ್ವೇಶ್ವರ ಭಟ್ಟು ಅನಿ ಕನ್ನಡ ಸಾಹಿತ್ಯ ಲೋಕಾಚೆ ಹೋಡ್‍ಹೋಡ್ ಜನ್ ಸೊಯಿರೆ ಜಾವ್ನು ಎತ್ತಾಸಂಚಿ. ಕಾರ್ಯಕ್ರಮು ಸೂರು ಜವ್ಚೆ ಏಕ್ ಗಂಟೇಚೆ ಫೂಡೇಚಿ ತುಮಿ ಎವ್ಕ. ಕಾರ್ಯಕ್ರಮಾಕ್ ಎದೇ ವೋಲಂಟೀರ್ಸ್ ಜಾಯಿ. ತಶ್ಶಿ ಜಾವ್ನು ತುಗೆಲೆ ಸಹಕಾರು ಮಕ್ಕ ಜಾಯಿ.

ಖಂಡಿತವಾಗಿಯೂ ಬರುತ್ತೇನೆ. ಕಾರ್ಯಕ್ರಮ ಆರಂಭವಾಗುವ ಎರಡು ಗಂಟೆಯ ಮುಂಚಿತವಾಗಿಯೇ ನಾನು, ರೇವಣ್ಣ ಹಾಗೂ ಮೋಹನರವರನ್ನು ಕರೆದುಕೊಂಡು ಬಂದು ಬಿಡುತ್ತೇನೆ.
ಖಂಡಿತ ಎತ್ತ. ಕಾರ್ಯಕ್ರಮ್ ಸೂರು ಜವ್ಚೆ ದೋನಿ ಗಂಟೇಚೆ ಫೂಡೇಚಿ ಹಾಂವ್, ರೇವಣ್ಣ ಅನಿ ಮೋಹನಾಕ್ ಅಪೊನುಘೇವ್ನು ಏವ್ನು ಸೊಡ್ತ.

ಇನ್ನೊಂದು ವಿಚಾರ. ಗಣಪತಿಯವರನ್ನು ಕರಿ. ನಿನ್ನ ಬಳಿಯೇ ಅವರಿಗೆ ಆಹ್ವಾನ ಪತ್ರಿಕೆಯನ್ನು ಕೊಡಲೇ?
ಅನೇಕ್ ವಿಷಯು. ಗಣಪತಿಕೈ ಅಪೈ. ತುಗೆಲಗ್ಗೀಚಿ ತಕ್ಕ ಇನ್ವಿಟೇಷನ್ ದಿವ್‍ಚ್‍ವೇ?

ನನ್ನ ಬಳಿಯೇ ಕೊಡಿ. ನಾನು ಅವನನ್ನು ಆಹ್ವಾನಿಸುತ್ತೇನೆ. ಆದರೆ ಅವನಿಗೆ ಬರಲು ಸಾಧ್ಯವಾಗಲಿಕ್ಕಿಲ್ಲ.
ಮೆಗೆಲಗ್ಗೀಚಿ ದೀಯಾಂಚಿ. ಹಾಂವ್ ತಕ್ಕ ಅಪೈತ. ಜಲ್ಲ್ಯಾರಿ ತಕ್ಕ ಎವ್ಚ್ಯಾಕ್ ಸಾಧ್ಯ್ ಜಾಯ್ನಾಲೆ.

ಹೀಗೋ? ಯಾಕೆ?
ತಶ್ಶಿವೇ? ಕಸಲ್ಯಾಕ್?

ಕೆಲವು ದಿನಗಳಿಂದ ಅವನ ಆರೋಗ್ಯ ಸರಿ ಇಲ್ಲ.
ಎದೇ ದೀಸು ತುಲ್ಯಾನ್ ತಗೆಲೆ ಆರೋಗ್ಯ್ ಸಮ್ ನಾ.

ಯಾಕೆ? ಏನಾಯಿತು?
ಕಸಲ್ಯಾಕ್? ಕಸಲೆ ಜಲ್ಲೆ?

ತಿಂಡಿ - ತಿನಸುಗಳ ವಿಚಾರದಲ್ಲಿ ಕ್ರಮವು ತಪ್ಪಿದ್ದರಿಂದ ಬಳಲುತ್ತಿದ್ದು, ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾನೆ. ಅವನಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಧ್ಯವಾದರೆ ಅವನನ್ನೂ ಕರೆತರುತ್ತೇನೆ.
ಖಾಣ್ - ಜವ್ಣಾಚೆ ವಿಷಯಾಂತು ಎದೇಚಿ ತಕಡೆಕಡೆ ಜಾವ್ನು ಅತ್ತ ಸುಧಾರ್ಸಿತಾಸ್. ತಕ್ಕ ರೆಶ್ಟಾಚೆ ಅಗತ್ಯ್ ಅಸ್ಸ ಮೋಣು ಡಾಕ್ಟ್ರಾನ್ ಸಂಗ್ಲ. ಸಾಧ್ಯ ಜಲ್ಲೆರಿ ತಕೈ ಅಪೊನುಘೇವ್ನು ಎತ್ತ.

ದೇವರ ಅನುಗ್ರಹದಿಂದ ಗಣಪತಿ ಶೀಘ್ರದಲ್ಲೇ ಗುಣಮುಖನಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಹೊರಡುತ್ತೇನೆ. ನನಗೆ ಇನ್ನೂ ತುಂಬಾ ಕೆಲಸವಿದೆ. ಕಾರ್ಯಕ್ರಮದ ದಿನ ಸಿಗೋಣ.
ದ್ಯಾವಾಲ್ ದಯೇಂತು ಗಣಪತಿ ವಗ್ಗಿ ಹುಷಾರ್ ಜವ್ವೊ ಮೋಣು ಹಾಂವ್ ದ್ಯಾವಾಲಗ್ಗಿ ಮಗ್ತ. ಹಾಂವ್ ಅನಿ ಭಾಯಿಸರ್ತ. ಮಕ್ಕ ಅನಿಕೈ ಮಸ್ತ್ ಕಾಮ್ ಅಸ್ಸ. ಕಾರ್ಯಕ್ರಮಾಚೆ ದೀಸು ಮೆಳ್ಯ.

ಹಾಗೆಯೇ ಆಗಲಿ.
ತಶೀಚಿ ಜವ್ವೊ.

Lesson prepared by: ಸಂದೀಪ್ ಶೆಣೈ, ಮೈಸೂರು

ಮುಂದುವರಿಯಲಿದೆ…

Labels: , , ,

Learn Mangalore Konkani - Lesson 34

This is a facsimile of the 'Learn Konkani' section of the now defunct website OurKarnataka.com. The lessons were prepared by Mr. Shenoy who ran the website, but I've not been able to contact him (I got no response when I wrote to the email ID given on the main page). The lessons can still be found on wayback.archive.org, so you can access them if you have the Baraha font.

The lessons were originally in Baraha font for the Kannada language, which is/was not Unicode compliant. With the help of Aravinda VK's ASCII to Unicode converter and the Kannada typing module at HiGopi.com, I've now redone lesson 34 in Unicode Kannada.

I owe thanks to Subramanya Shenoy for proof corrections.

ಕೋಂಕಣಿ ಸಾರಸ್ವತರ ಮತ್ತು ಕ್ಯಾಥೊಲಿಕ್ ಕ್ರಿಶ್ಚನ್'ರ ಭಾಷೆ. ಮರಾಥಿ‍-ಹಿಂದಿ ಭಾಷೆಗಳ ಮಿಶ್ರಿತವಾದ ಈ ಭಾಷೆಯನ್ನು ಕಲಿಯಲು ಕೊಂಚ ಕಷ್ಟ. ಅದರೂ ಒಕೆಸೀ ತನ್ನ ಚಿಕ್ಕ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದೆ. 

ಬಾ ಸತೀಶ, ನೀನು ಹೇಗಿದ್ದೀಯಾ?
ಯೋ ಸತೀಶ, ತೂ ಕಸ್ಶಿ ಅಸ್ಸ್?

ನಾನು ಚೆನ್ನಾಗಿದ್ದೇನೆ ಮೋಹನ. ನಿನ್ನ ತಂದೆಯವರ ನಿಧನದ ವಾರ್ತೆಯನ್ನು ಕೇಳಿ ಮನಸ್ಸಿಗೆ ಬಹಳ ದುಃಖವಾಯಿತು. ನಾನು ಊರಿನಲ್ಲಿ ಇರಲಿಲ್ಲ. ಹಾಗಾಗಿ ಬರಲು ಆಗಲಿಲ್ಲ. ಅವರು ಆರೋಗ್ಯದಿಂದ ಇದ್ದರಲ್ಲವೇ?
ಹಾಂವ್ ಆರಾಮೆರಿ ಅಸ್ಸ ಮೋಹನ. ತುಗೆಲೆ ಅನ್ನಾನ್ ಗೆಲ್ಲೆಲೆ ಸುದ್ದಿ ಐಕುನು ಮನಾಕ್ ಮಸ್ತ್ ಬ್ಯಾಜಾರು ಜಲ್ಲೆ. ಹಾಂವ್ ಗಾಂವಾರಿ ನಾಶಿಲೊ. ತಶ್ಶಿ ಜಾವ್ನು ಎವ್ಚ್ಯಾಕ್ ಜಾಯ್ನಿ. ತನಿ ಆರೋಗ್ಯ ಜಾವ್ನು ಅಶ್ಶಿಲೀಂಚಿ ನವೇ?

ಆರೋಗ್ಯದಿಂದಲೇ ಇದ್ದರು. ಆದರೆ ಕಳೆದ ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾದರು.
ಆರೋಗ್ಯಾರಿ ಅಶ್ಶಿಲಿಂಚಿ. ಜಲ್ಲ್ಯಾರಿ ಕಳ್ವಲೆಲೆ ಸ್ವಲ್ಪ ದೀಸಾತುಲೆನ್ ಮಸ್ತ್ ಹುಶಾರ್ ನಾಶಿಲೆ.

ಯಾಕೆ? ಒಳ್ಳೆಯ ವೈದ್ಯರ ಬಳಿ ಕರೆದುಕೊಂಡು ಹೋಗಲಿಲ್ಲವೇ?
ಕಸಲ್ಯಾಕ್? ಲಾಯಿಕ್ ಡಾಕ್ಟ್ರಾಲಗ್ಗಿ ವರ್ನೀವೇ?

ಎಲ್ಲಾ ರೀತಿಯ ಶುಶ್ರೂಷೆಯನ್ನು ನೀಡಲಾಗಿತ್ತು. ಆದರೆ ನಮ್ಮ ಹಣೆಬರಹದಲ್ಲಿದ್ದುದು ಇಷ್ಟೇ.
ಪೂರಾ ನಮ್ನ್ಯಾಚೆ ಟ್ರೀಟ್‍ಮೆಂಟ್ ದೀವ್ನು ಜಲ್ಲೆಲೆ. ಜಲ್ಲ್ಯಾರಿ ಅಮ್ಗೆಲೆ ಹಣೇಬರಪಾಂತು ಅಸ್ಶಿಲೆ ಇತ್ಲೇಚಿ.

ದುಃಖಿಸಬೇಡ. ನಿನ್ನನ್ನು ಓದಿಸಿ ಬೆಳೆಸಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ. ನಿನ್ನ ಕರ್ತವ್ಯವನ್ನು ನೀನು ಮಾಡಿದ್ದೀಯಾ. ನೀನು ನಿನ್ನ ತಾಯಿಯ ಮುಂದೆ ದುಃಖಿಸಬಾರದು. ಅವರ ಮುಂದೆ ನಗುನಗುತ್ತಾ ಇರಬೇಕು.
ಬೇಜಾರ್ ಕೋರ್ನಕ. ತುಕ್ಕ ಸಿಕೋನು ಹೋಡು ಕೋರ್ನು ತನಿ ತಂಗೆಲೆ ಕರ್ತವ್ಯ್ ಕೆಲ್ಲ. ತುಗೆಲೆ ಕರ್ತವ್ಯ್ ತೂ ಕೆಲ್ಲ. ತೂ ತುಗೆಲೆ ಅಮ್ಮಾಲೆ ಎದ್ರಾಕ್ ಬೇಜಾರ್ ಕೊರುನಜ್ಜ್. ತಂಗೆಲೆ ಎದ್ರಾಕ್ ಹಸ್ತಾಚಿ ಅಸ್ಕ.

ಹಾಗೆಯೇ ಆಗಲಿ.
ತಶೀ ಜಾಯಿತ್.

ನಿನ್ನ ಅಮ್ಮನವರು ಹೇಗಿದ್ದಾರೆ?
ತುಗೆಲೆ ಅಮ್ಮ ಕಶ್ಶಿ ಅಸ್ಸ್?

ಅವರು ಆರೋಗ್ಯದಿಂದ ಇದ್ದಾರೆ. ನನ್ನ ತಂದೆಯವರನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ.
ತನಿ ಆರಾಮೇಂತು ಅಸ್ಸಾಂಚಿ. ಮೆಗೆಲೆ ಅನ್ನಾಕ್ ವಿಸೊರುಕ್ ಪ್ರಯತ್ನ್ ಕರ್ತಾಸಂಚಿ.

ಆ ನೋವು ಬೇಗನೇ ಹೋಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಂದ ಹಾಗೆ ನೀನು ಎಷ್ಟು ದಿನಗಳ ರಜದ ಮೇಲೆ ಬಂದಿರುವೆ?
ತ್ಯಾಂ ದೂಕಿ ವಗ್ಗಿ ವೊಚ್ಚೊ ಮೋಣು ದ್ಯಾವಾಲಗ್ಗಿ ಮಗ್ತ. ಸಂಗಿಲೆಮಣ್ಕೆ ತೂ ಕಿತ್ಲೆ ದೀಸಾಚೆ ರಜೇಂತು ಐಲ?

ಒಂದು ವಾರದ ರಜೆಯಲ್ಲಿ ಬಂದಿರುತ್ತೇನೆ. ಆದರೆ ಇಲ್ಲಿ ಮೈಸೂರಿನಲ್ಲಿ ತಾಯಿಯೊಬ್ಬರೇ ಇರಬೇಕಾಗಿರುವುದರಿಂದ ಶಿವಮೊಗ್ಗದ ನನ್ನ ಕೆಲಸವನ್ನು ಬಿಡಲು ನಿರ್ಧರಿಸಿದ್ದೇನೆ.
ಏಕ್ ವಾರಾಚೆ ರಜೇಂತು ಐಲ. ಜಲ್ಲ್ಯಾರಿ ಹಂಗ ಮೈಸೂರಾಂತು ಅಮ್ಮಾನ್ ಎಕ್ಲೀ ರಬ್ಕಜತ್ತಾ ಮೋಣು ಶಿವಮೊಗ್ಗಾಚೆ ಮೆಗೆಲೆ ಕಾಮ್ ಸೊಡ್ಯ ಮೋಣು ನಿರ್ಧಾರು ಕೆಲ್ಲ.

ಕೆಲಸವನ್ನು ಬಿಟ್ಟು ನಂತರ ಮೈಸೂರಿನಲ್ಲಿ ಏನು ಮಾಡಬೇಕೆಂದುಕೊಂಡಿರುವಿ?
ಕಾಮ್ ಸೋಣು ಮಗಿರಿ ಮೈಸೂರಾಂತು ಕಸನೆ ಕರ್ಕ ಮೋಣು ಅಸ್ಸ್?

ನನಗೆ ಮೈಸೂರಿನ ಎರಡು - ಮೂರು ಸಂಸ್ಥೆಗಳು ಕೆಲಸಕ್ಕಾಗಿ ಕರೆದಿವೆ. ಉತ್ತಮವಾದುದ್ದನ್ನು ಆಯ್ಕೆ ಮಾಡಿ ಸೇರಿಕೊಳ್ಳುತ್ತೇನೆ.
ಮಕ್ಕ ಮೈಸೂರಾಂತು ದೋನಿ - ತೀನಿ ಕ‍ಂಪೆನೀನ್ ಕಾಮಾಕ್ ಅಪೈಲ. ಲಾಇಕ್ ಕಂಚೆ ಮೋಣು ತಕ್ಕ ಸೇರ್ವತ.

ಹಾಗೆಯೇ ಮಾಡು. ನೀನು ಇಲ್ಲೇ ಮೈಸೂರಿನಲ್ಲಿ ಇದ್ದರೆ ನಿನಗೂ ನಿನ್ನ ತಾಯಿಯವರಿಗೂ ಒಳ್ಳೆಯದು.
ತಶೀಚಿ ಕರಿ. ತೂ ಹಂಗಾಚಿ ಮೈಸೂರಾಂತೂಚಿ ಅಸ್ಲ್ಯಾರಿ ತುಕೈ ತುಗೆಲೆ ಅಮ್ಮಾಕೈ ಲಾಯಿಕ್.

ಅದು ಮಾತ್ರ ನಿಜ.
ಥ್ಯಾ ಮಾತ್ರ್ ಬದ್ದ್.

ಹಾಗಾದರೆ ಮೋಹನ ನಾನಿನ್ನು ಹೊರಡುತ್ತೇನೆ. ನನಗೆ ಸ್ವಲ್ಪ ತುರ್ತು ಕೆಲಸವಿದೆ. ಸಂಜೆ ನಿಮ್ಮ ಮನೆಗೆ ಬಂದು ಭೇಟಿಯಾಗುತ್ತೇನೆ.
ತಸಲ್ಯಾರಿ ಮೋಹನ ಹಾಂವ್ ಅನಿ ಭಾಯಿಸರ್ತ. ಮಕ್ಕ ಎದೇಚಿ ಅರ್ಜೆಂಟ್ ಕಾಮ್ ಅಸ್ಸ್. ಸಂಜೇರಿ ತುಮ್ಗೆಲೆ ಘರ್ಕಡೆಕ್ ಯೇವ್ನು ಮೆಳ್ತ.

ಹಾಗೆಯೇ ಆಗಲಿ. ಪುನಃ ಸಿಗೋಣ.
ತಶೀ ಜವ್ವೊ. ಆಪಾಸ್ ಮೆಳ್ಯ.

Lesson prepared by: ಸಂದೀಪ್ ಶೆಣೈ, ಮೈಸೂರು

ಮುಂದುವರಿಯಲಿದೆ…

Labels: , , ,